Saturday, 26 November, 2011

ದೇವರ ದರ್ಶನ

ಶ್ರೀಹರಿ ದೇವಸ್ಥಾನ ಹೋಗಿದ್ದ.

ಎಲ್ಲರೂ ದೇವರ ದರ್ಶನಗೋಸ್ಕರ ಸರದಿ ಸಾಲಿನಲ್ಲಿ ಕಾಯುತ್ತಿದ್ದರು. ಶ್ರೀಹರಿಯು ಸಾಲಿನಲ್ಲಿ ನಿಂತಿದ್ದ.

ಒಬ್ಬ ಶ್ರೀಮಂತ ತನ್ನ ಪರಿವಾರದೊಂದಿಗೆ ಬಂದು ಸರದಿ ಸಾಲನ್ನು ಕಡೆಗಣಿಸಿ ಸಾಲಲ್ಲಿ ನಿಲ್ಲದೆ ನೇರವಾಗಿ ದೇವರ ಗುಡಿಯಕಡೆ ಹೋದ.

ಇದನ್ನು ಗಮನಿಸಿದ ಒಬ್ಬ ವಯೋವೃದ್ಧ ಪೂಜಾರಿಯವರು ಶ್ರೀಮಂತರಿಗೆ "ತಾವು ದೇವರ ದರ್ಶನಕ್ಕಾಗಿ ಬಂದಿದ್ದಿರಿ ಅಲ್ಲವೇ " ಎಂದು ಕೇಳಿದರು.

ಶ್ರೀಮಂತರು " ಹೌದು ಪೂಜರಿಯವರೇ, ಬೇಗ ನಮ್ಮ ಪೂಜೆ ಸಲ್ಲಿಸಿ , ನಮಗೆ ಬೇರೆ ಕಡೆಯೂ ಹೋಗಲ್ಲಿಕ್ಕೆ ಇದೆ.

ಪೂಜಾರಿಯವರು " ಶ್ರೀಮಂತರೇ , ಬೇಜಾರ ಮಾಡಬೇಡಿ ,ಆದರೆ ನೀವು ಕೊಡುವ ಪೂಜೆ ಈಗ ದೇವರು ಸ್ವೀಕರಿಸಲಾರ ".

ಶ್ರೀಮಂತರು " ಪೂಜರಿಯವರೇ, ಯಾಕೆ ಹೀಗೆ ಹೇಳುತ್ತಿದ್ದೀರಿ".

ಪೂಜಾರಿಯವರು " ಶ್ರೀಮಂತರೇ, ಈಗ ದೇವರ ಗಮನ ಸರದಿ ಸಾಲಿನಲ್ಲಿ ಭಕ್ತಿ ಶ್ರದ್ಧೆಯಿಂದ ನಿಂತ ಭಕ್ತರ ಮೇಲೆ ಇದೆ. ನೀವು ಅವಸರವಾಗಿ ಕೊಡುವ ಪೂಜೆಯನ್ನು ಅವನು ಗಮನಿಸಲಾರ, ದೇವರಿಗೆ ಬೇಕಾದದ್ದು ಭಕ್ತಿ ಶ್ರದ್ಧೆ, ಅವಸರವಾಗಿ ಕೊಡುವ ಪೂಜೆ ಅಲ್ಲ" .

ಶ್ರೀಮಂತರು ಮರು ಮಾತನಾಡದೆ ತನ್ನ ಪರಿವಾರದೊಂದಿಗೆ ಸರದಿ ಸಾಲಿನಲ್ಲಿ ಹೋಗಿ ನಿಂತರು .
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment