Wednesday, November 16, 2011

ಅವನಿಲ್ಲದೆ

ಅವನಿಲ್ಲದೆ...

ಈಗಲೂ
ಸೂರ್ಯೋದಯ ಆಗುತ್ತದೆ
ಮಂಜು ಮುಸುಕುತ್ತದೆ
ಹೂವು ಅರಳುತ್ತದೆ
ಹೇಗೋ ಹೊತ್ತು ಕಳೆಯುತ್ತದೆ

ಪಕ್ಷಿಗಳ ಸ್ವರ ಕೇಳುತ್ತದೆ
ಕೋಗಿಲೆ ಹಾಡುತ್ತದೆ
ಪಾತರಗಿತ್ತಿ ನಲಿಯುತ್ತದೆ
ಹೇಗೋ ದಿನ ಮುಗಿಯುತ್ತದೆ

ಆದರೆ ಅವನಿಲ್ಲದೆ....

ಜೀವನ ನೀರಸವಾಗಿದೆ
ಮನಸ್ಸಲ್ಲಿ ಉಲ್ಲಾಸ ಇಲ್ಲದಾಗಿದೆ
ನಿಸರ್ಗದ ಸೊಗಸು ಬಣ್ಣ ರಹಿತವಾಗಿದೆ
ಕಳೆಯುವ ಹೊತ್ತು ಭಾರಿಯಾಗಿದೆ

ಸ್ನೇಹಕ್ಕಿಂತ ಕೋಪ ಮೇಲಾಗಿದೆ
ಸತ್ಯಕ್ಕಿಂತ ಸುಳ್ಳು ಪ್ರಿಯವಾಗಿದೆ
ಪ್ರೀತಿಗಿಂತ ಅಹಂ ಬಿಗಿಯಾಗಿದೆ
ದಿನಗಳು ಹೀಗೆಯೇ ವ್ಯರ್ಥವಾಗುತ್ತಿದೆ
by ಹರೀಶ್ ಶೆಟ್ಟಿ, ಶಿರ್ವ

2 comments:

  1. ಕೊನೆಯ ಸಾಲುಗಳು ಬಹಳ ಮನಸ್ಸಿಗೆ ತಾಕುತ್ತದೆ....

    "ಸ್ನೇಹಕ್ಕಿಂತ ಕೋಪ ಮೇಲಾಗಿದೆ
    ಸತ್ಯಕ್ಕಿಂತ ಸುಳ್ಳು ಪ್ರಿಯವಾಗಿದೆ
    ಪ್ರೀತಿಗಿಂತ ಅಹಂ ಬಿಗಿಯಾಗಿದೆ
    ದಿನಗಳು ಹೀಗೆಯೇ ವ್ಯರ್ಥವಾಗುತ್ತಿದೆ"

    ನೀವು ಭಾವಗಳನ್ನು ವ್ಯಕ್ತಪಡಿಸೋ ರೀತಿ ಬಲು ಸೊಗಸು.. ಇಷ್ಟ ವಾಯ್ತು..

    ReplyDelete
  2. ತುಂಬಾ ಧನ್ಯವಾದಗಳು.....ನಿಮ್ಮ ಪ್ರೋತ್ಸಾಹ ನನಗೆ ಇನ್ನೂ ಬರೆಯಲು ಸ್ಪೂರ್ತಿ ನೀಡುತ್ತದೆ .....

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...