Sunday, October 9, 2011

ಸಂತಸದ ಹಾದಿ

ಯಾವ ಹಾದಿಯಲಿ ಹೋಗಲಿ
ಯಾವ ಹಾದಿಯಲಿ ನಡೆಯಲಿ

ಬಾಲ್ಯವೆಲ್ಲ ಕಳೆದೆ ಆಡಿ ಓಡಿ ನಿದ್ರೆಯಲಿ 
ಯೌವನ ಕಳೆಯಿತು ತಿರುಗಾಟದಲಿ

ಮದುವೆ ಆಗಿ ಸಿಲುಕಿದೆ ದಾಂಪತ್ಯದ ಚಕ್ರವ್ಯೂಹದಲಿ
ಇನ್ನೂ ಬರಲಿಲ್ಲ ಬುದ್ದಿ ಅಲೆಯುತ್ತಿದ್ದೇನೆ ಪಶ್ಚಾತ್ತಾಪದಲಿ

ಹೇಗೋ ಸಾಗಿಸುತ್ತಿದ್ದೇನೆ ಜೀವನ ಕಷ್ಟದಲಿ
ಜೀವನದ ಅಭಾವ ಕಾಣುತ್ತಿದ್ದೇನೆ ನನ್ನ ಮಕ್ಕಳಲಿ

ಸಂತಸದ ಹಾದಿಯ ಹುಡುಕಿ ಹುಡುಕಿ ಬಿದ್ದಿದ್ದೇನೆ ದುಃಖದಲಿ
ಗೃಹಸ್ಥ ಜೀವನದಿಂದ ಸನ್ಯಾಸ ಒಳ್ಳೆಯದೆಂಬ ಭಾವ ಹುಟ್ಟಿತು ಮನದಲಿ

ಜೀವನದಲಿ ಜಿಗುಪ್ಸೆ ಉಂಟಾಗಿ ಹುಟ್ಟಿತು ವೈರಾಗ್ಯ ಮನದಲಿ
ಹೋದೆ ಸನ್ಯಾಸಿಯಾಗಲು ಪ್ರಖ್ಯಾತ ಗುರುಗಳಲ್ಲಿ

ಏಕೆ ನಿನಗೆ ಸನ್ಯಾಸ ದೀಕ್ಷೆ ಎಂದು ಕೇಳಿದರವರು ನನ್ನಲ್ಲಿ
ಇದೆ ಎಲ್ಲಕಿಂತ ದೊಡ್ಡ ವೈರಾಗ್ಯ ಈ ಗೃಹಸ್ಥ ಧರ್ಮದಲಿ

ತನ್ನ ಕುಟುಂಬಕ್ಕೆ ಸುಖ ನೀಡದವನು ಹೇಗೆ ಸಂತೋಷ ತರುವನು ಸಮಾಜದಲಿ
ವೈರಾಗ್ಯ ಜೀವನ ಆನಂದಿಸಬಹುದು ನೀನು ಒಟ್ಟಿಗೆ ಇದ್ದು ಪರಿವಾರದಲಿ

ಅವರ ಮಾತು ಕೇಳಿ ಬದಲಾವಣೆ ಆಯಿತು ನನ್ನ ವಿಚಾರದಲಿ
ಜೀವನದ ಸತ್ಯ ತಿಳಿದು ನಂಬಿಕೆ ಮೂಡಿತು ಗೃಹಸ್ಥ ಧರ್ಮದಲಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...