Tuesday, October 25, 2011

ಒಂದು ವೇಳೆಯ ಊಟ

ಕಾಯುತ್ತಿದ್ದೇನೆ
ಎಲ್ಲಿದ್ದಾರೆ ಇವರು ?
ಏನಾದರೂ ಅನಾಹುತ ಆಗಲಿಲ್ಲವಲ್ಲ ?

ಮನೆಯ ಪರಿಸ್ಥಿತಿಯಲಿ ನೆನೆದು
ಮಕ್ಕಳ ದಯನೀಯ ಸ್ಥಿತಿ ಕಂಡು
ತನ್ನ ಅಸಹಾಯಕತೆಗೆ ನೊಂದು
ಚಿಂತೆಯಿಂದ ಖಾಲಿ ಕಿಸೆ
ಹೀಗೆಯೇ ಹೊರಗೆ ಹೋಗಿದವರು ಬರಲಿಲ್ಲವಲ್ಲ 

ಮನೆ ಹೊರಗೆ ಹಬ್ಬದ ಸಡಗರ
ಮನೆ ಒಳಗೆ ದುಃಖದ ಭಾರ 
ಒಲೆ ಮೇಲೆ ಇಲ್ಲ ಏನೂ ಆಹಾರ
ಹಸಿವೆಯಿಂದ ಬಳಲುತ್ತಿದ್ದ ಮಕ್ಕಳ
ಖಾಲಿ ಹೊಟ್ಟೆಗೆ ಏನೋ ತರಲು ಹೋದವರು ಬರಲಿಲ್ಲವಲ್ಲ

ಬಂದರು ಅವರು
ಹತಾಷೆಯಿಂದ ಕೂಡಿದ ಅವರ ಮುಖವ
ಕೈಯಲ್ಲಿ ಎರಡು ತೊಟ್ಟೆಯಲಿ ಏನೋ ತಿನ್ನುವ
ಅವರ ಮೌನ ಮುಖದಲಿ ಕಿರು ಸಂತೋಷ
ಒಂದು ವೇಳೆಯ ಊಟದ ವ್ಯವಸ್ತೆ ಆಯಿತಲ್ಲ
by ಹರೀಶ್ ಶೆಟ್ಟಿ, ಶಿರ್ವ

2 comments:

  1. :( ಕಡು ಬಡವರ ದೀಪಾವಳಿ ಇದು..!! :(
    ಎಷ್ಟೋ ಜನ ಶ್ರೀಮಂತರು ಅನಾವಶ್ಯಕವಾಗಿ
    ಪಟಾಕಿಗಾಗಿ ಹಣ ಖರ್ಚು ಮಾಡುವ ಮುನ್ನ ಯೋಚಿಸಬೇಕು..
    ಮನ ತಟ್ಟಿತು ನಿಮ್ಮೀ ಕವನ.. :'( :)
    ಮರೆಯದ ದೀಪಾವಳಿಗೆ.., ಮರೆಯದ ಕವಿತೆ..

    ReplyDelete
  2. ಧನ್ಯವಾದಗಳು ಸರ್, ದೀಪಾವಳಿಯ ಶುಭಾಶಯಗಳು ...

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...