Sunday 28 August 2011

ವೀಸಾ ಬಂದಿತು

ವೀಸಾ ಬಂದಿತು
ಕನಸು ವಾಸ್ತವ ಹಂತಕ್ಕೆ ಸೇರಿತು
ಮನದಲಿ ಒಂದು ಭಯ ಮೂಡಿತು
ದೂರ ಹೋಗುವೆ ಇನ್ನೂ ಎಂದು ಜೀವ ನಡುಗಿತು 

ಎಲ್ಲರಿಂದ ಬೇಟಿ ಮಾಡಿ ಆಯಿತು
ಔತಣ ,ಉಪಚಾರ ಆಯಿತು
ಬ್ಯಾಗ್ ಎಲ್ಲ ತುಂಬಿಸಿ ಆಯಿತು
ಹೋಗುವ ಸಮಯ ಹತ್ತಿರವಾಯಿತು

ಅವಳ ಮುಖ ಬಾಡಿತು
ಹತಾಶೆಯಿಂದ ಕೂಡಿತು
ಹೃದಯ ಅವಳ ಅಳುತ್ತಿತ್ತು
ಕಣ್ಣಲಿ ನೀರು ತುಂಬಿತು 
ಮಗ ಅಲ್ಲೇ ಕೂತಿದ್ದ
ಆಟ ಓಟಗಳ ಮರೆತಿದ್ದ
ಕಣ್ಣಿರನ್ನು ಅವಿತಿದ್ದ
ನನ್ನನ್ನೇ ನೋಡುತ್ತಿದ್ದ

ಆ ಕಡೆ ಕನಸಿನ ಸಾಗರ
ಈ ಕಡೆ ಬಿಟ್ಟು ಹೋಗುತ್ತಿದ್ದೆ ಸಂಸಾರ
ಕಾಣುವೆನೇ ಇನ್ನು ಮನೆಯ ದ್ವಾರ ?
ಹೆಚ್ಚಾಯಿತು ಕನಸಿಗಿಂತ ಕಣ್ಣಿರ ಭಾರ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment