Tuesday, July 12, 2011

೨೦ ಪೈಸೆಯ ದೀಪಾವಳಿ


ಪ್ರಮೋದ ನನ್ನ ಬಾಲ್ಯ ಮಿತ್ರ, ಪ್ರಮೋದನಿಗೆ ಹಿಂದಿ ಚಿತ್ರಪಟ  ನೋಡುವುದೆಂದರೆ  ತುಂಬಾ ಇಷ್ಟ , ಅವನು ಬೇಕಾದರೆ ಇಡಿ ದಿನ ನಿಮ್ಮಲ್ಲಿ ಹಿಂದಿ ಚಿತ್ರಪಟದ ಬಗ್ಗೆ ಮಾತಾಡಬಲ್ಲನು, ನಾನು ಅವನೊಟ್ಟಿಗೆ  ಹಿಂದಿ ಫಿಲಂ ನ ಬಗ್ಗೆ ಗಂಟೆ ಗಂಟೆ ಮಾತನಾಡುತ್ತಿದ್ದೆ, ಅವನ ತಂದೆ ರೈಲ್ವೆಯಲ್ಲಿ ಕೆಲಸಕ್ಕೆ ಇದ್ದರು ಹಾಗು ಅವನ ತಾಯಿ ಹೊರಗೆ ಮನೆ ಕೆಲಸಕ್ಕೆ ಹೋಗುತ್ತಿದ್ದರು.

ಆ ದಿವಸದಲ್ಲಿ ಜನರು ಹಬ್ಬವನ್ನು ತುಂಬಾ ಸಂಭ್ರಮ ಹಾಗು ಮನದಿಂದ ಆಚಾರಿಸುತ್ತಿದ್ದರು, ನಾವು ಮಕ್ಕಳಿಗೆ ಹಬ್ಬ ಬರುತ್ತದೆ ಎಂದರೆ ಖುಷಿಯೇ ಖುಷಿ, ಪ್ರಮೋದ್ ಮತ್ತು ನಾನು ಒಂದೇ ವಯಸ್ಸಿನವರು, ನಮಗೆ ೧೧ ವರ್ಷ ನಡೆಯುತ್ತಿದಾಗ ಕತ್ತಲಿನಿಂದ ಬೆಳಕಿನೆಡೆಗೆ ಒಯ್ಯುವ ಹಬ್ಬ ದೀಪಾವಳಿ ಬಂತು, ದೀಪಾವಳಿ ಅಂದರೆ ನಾವು ಮಕ್ಕಳಿಗೆ ತುಂಬಾ ದೊಡ್ಡ ಉತ್ಸವ, ಬೆಳಿಗ್ಗೆ ಬೇಗ ಎದ್ದು ಸ್ನಾನ  ಮುಗಿಸಿ ನಾವೆಲ್ಲ ಮಕ್ಕಳು ಪಟಾಕಿ ಹಚ್ಚಲು ಪ್ರಾರಂಭಿಸಿದೆವು, ಆಗ ಒಂದೇ ಸಮನೆ ನನಗೆ ಅಲ್ಲಿ ಪ್ರಮೋದ್ ಇಲ್ಲ ಎಂದು ಜ್ಞಾಪಕವಾಯಿತು, ನಾನು ಪ್ರಮೋದನ ಮನೆಗೆ ಹೋಗಿ ಬಾಗಿಲು ಬಾರಿಸಿದೆ.

ಅವನ ತಂದೆ ಬಾಗಿಲು ತೆರೆದು ಕೋಪದಿಂದ ಕೇಳಿದರು "ಕಾಯ್ ಹೈ " (ಏನು) . 

ನಾನು ಕೇಳಿದೆ " ಪ್ರಮೋದ್ ಆಯೇ ಕಾ"? (ಪ್ರಮೋದ್ ಇದ್ದಾನ?) .

ಅವರು ಕೋಪದಿಂದಲೇ ಉತ್ತರಿಸಿದರು "ಪ್ರಮೋದ್ ಅಸುನ್ ಕಾಯ್ ಕರನಾರ್, ಜಾ ಇಕ್ದುನ್ " (ಪ್ರಮೋದ್ ಇದ್ದು ಏನ್ ಮಾಡ್ತಿ, ಹೋಗು ಇಲ್ಲಿಂದ). 

ನನಗೆ ಅವಾಗ ತುಂಬಾ ಬೇಸರ ವಾಯಿತು, ಆದರೆ ಈಗ ನನಗೆ ಆ ಘಟನೆ ನೆನಪಾದಾಗ ಅವರ ತಂದೆ ಯಾಕೆ ಹಾಗೆ ಮಾಡಿದು ಎಂದು ನನಗೆ ತಿಳಿಯುತ್ತದೆ, ಹೊರಗೆ ಎಲ್ಲ ಮಕ್ಕಳು ಪಟಾಕಿ ಬಿಡುವಾಗ ತನ್ನ ಮಕ್ಕಳು ಆಸೆಯಿಂದ ನೋಡ ಬಾರದೆಂದು  ಪ್ರಮೋದನ ತಂದೆ ಅವರಿಗೆ (ಪ್ರಮೋದ್ ಹಾಗು ಅವನ ಸಹೋದರರಿಗೆ) ಹೊರಗೆ ಬಿಡುತಿರಲಿಲ್ಲ, ಆ ಸಮಯದಲ್ಲಿ ಬಡ ತಂದೆಗೆ ಎಷ್ಟು ಸಂಕಟವಾಗಿರಬೇಕು.

ಸಂಜೆಗೆ ನಾನು ಕೆಳಗೆ ಬಂದಾಗ ನಾನು ಪ್ರಮೋದನನ್ನು ಬೇಟಿಯಾದೆ, ಅವಾಗ ಪ್ರಮೋದನ ಕಣ್ಣು ಮಿನುಗುತಿತ್ತು .

ನಾನು ಅವನಿಗೆ ಕೇಳಿದೆ " ಕುಟೆ ಹೋತಾ ಸಕಾಲಿ, ಮೀ ಆಲೋ ಹೋತೋ ತುಜಾ ಘರಿ " (ನೀನು ಬೆಳ್ಳಿಗ್ಗೆ ಎಲ್ಲಿದ್ದಿ, ನಾನು ಬಂದಿದೆ ನಿನ್ನ ಮನೆಗೆ). 

ಅವನು ಹೇಳಿದ "ಜಾವು ದೇ ರೆ , ಯೇ ಬಗ್ಹ್ ಮಾಜಾ ಕಡೆ ವೀಸ್ ಪೈಸೆ " (ಅದು ಬಿಡು ....ಇದು ನೋಡು ನನ್ನ ಹತ್ತಿರ ೨೦ ಪೈಸೆ). 

ಆ ಸಮಯದಲ್ಲಿ ೨೦ ಪೈಸೆಯ ಶಟಕೋನ ಆಕಾರದ   ಅಲುಮಿನಿಯುಂ ಕೊಯೀನ್  ಬರುತ್ತಿತ್ತು. ಅವನು ತುಂಬಾ ಖುಷಿಯಲ್ಲಿದ್ದ, 

ನಾನು ಅವನಿಗೆ ಕೇಳಿದೆ "ಇದು ಎಲ್ಲಿಂದ ಬಂತು ". 

ಅದಕ್ಕೆ ಅವನು "ನನ್ನ ತಂದೆಯವರು ಕೊಟ್ಟರು ಹಾಗು ನಾನು ಇದರಿಂದ ಪಟಾಕಿ  ತರುತ್ತೇನೆ" . 

ನನಗೆ ಅವನ ಮೇಲೆ ತುಂಬಾ ದುಃಖ ಮೂಡಿತು , ಪಾಪ... ೨೦ ಪೈಸೆ ಯಿಂದ ಏನು ಬರುತ್ತದೆ. 

ಆದರು ನಾನು ಅವನಿಗೆ  "ನಿನಗೆ ಇದರಿಂದ ಲೂಸ್ ಲವಂಗಿ (ಚಿಕ್ಕ ಪಟಾಕಿ) ಸಿಗಬಹುದು, ಮಹಾವೀರ್ ಸ್ಟೋರ್ ನಲ್ಲಿ ಸಿಗುತ್ತದೆ, ಆದರೆ ಮಹಾವೀರ್ ಸ್ಟೋರ್ ತುಂಬಾ ದೂರ ಇದೆ", ಎಂದು  ಹೇಳಿದೆ. 

ಅದಕ್ಕೆ ಅವನು "ತೊಂದರೆ ಇಲ್ಲ ನಾನು ಹೋಗುತ್ತೇನೆ" ಎಂದು ಹೇಳಿದ, 

ನಾನು ಅವನಿಗೆ " ನಾನು ಸಹ ನಿನ್ನೊಟ್ಟಿಗೆ ಬರುತ್ತೇನೆಂದು" ಹೇಳಿದೆ. 

ನಾವಿಬ್ಬರು ತುಂಬಾ ದೂರ ನಡೆದು ಕೊಂಡು ಹೋಗಿ, ೨೦ ಪೈಸೆ ಕೊಟ್ಟು ಆ ಲವಂಗಿ ತಂದೆವು. ಪಟಾಕಿ ತಂದ ನಂತರ ಪ್ರಮೋದ್ ತುಂಬಾ  ಖುಷಿಯಲ್ಲಿದ್ದ  ಹಾಗು ನನಗೆ ಹೇಳಿದ "ನಾವು ನಮ್ಮ ಬಿಲ್ಡಿಂಗ್ ಮುಟ್ಟಿದ ಮೇಲೆ ಇದನ್ನು ಬಿಡುವ",  ನಾನು "ಓಕೆ  "  ಎಂದು ಹೇಳಿದೆ.

ಸ್ವಲ್ಪ ಹೊತ್ತು ನಂತರ ನಾವು ನಮ್ಮ ಬಿಲ್ಡಿಂಗಿ ಗೆ ಮುಟ್ಟಿದೆವು. 

ಪ್ರಮೋದ್  "ನಿಲ್ಲು, ನಾನು ಅಗರಬತ್ತಿ ತರುತ್ತೇನೆಂದು" ಹೇಳಿದ. 

ಅವನು ಅಗರಬತ್ತಿ ಹಚ್ಚಿ ತಂದು "ಈಗ ನಾನಿದನ್ನು ಬಿಡುತ್ತೇನೆ, ನೀನು ನೋಡು ಓಕೆ" ಎಂದು ಹೇಳಿದ. 

ಅವನು ಆ ಲವಂಗಿಯನ್ನು ಕೆಳಗೆ ಇಟ್ಟು, ಆ ಅಗರಬತ್ತಿಯಿಂದ ಅದಕ್ಕೆ ಹಚ್ಚಿದ......ಎರಡೇ ಸೆಕೆಂಡ್  ....ಪ್ರಮೋದ್ ನ ೨೦ ಪೈಸೆ ಲವಂಗಿ (ಪಟಾಕಿ) ಪಟಪಟ ಅಂತ ಹೊಡೆದು ಹೋಯಿತು, ನಾನು ಪ್ರಮೋದ್ ನ ಮುಖದಲ್ಲಿ ತುಂಬಾ ಆನಂದ ಹಾಗು ಸಮಾಧಾನ ಕಂಡೆ. 

ನನಗೆ ಈ ೨೦ ಪೈಸೆಯ  ದೀಪಾವಳಿ ಮರೆಯುವಂತಿರಲಿಲ್ಲ, ಈಗಲೂ ದೀಪಾವಳಿ ಬಂದರೆ ಮೊದಲು ಬಾಲ್ಯದ ಈ  ದೀಪಾವಳಿ ನೆನಪಾಗುತ್ತದೆ.

by  ಹರೀಶ್ ಶೆಟ್ಟಿ, ಶಿರ್ವ

2 comments:

  1. ಲೇಖನ ಚೆಂದ ಬಂತು ಶೆಟ್ಟರೆ. ಹಿಂದೊಮ್ಮೆ ಈ ಲೇಖನವನ್ನು ನಿಲುಮೆಗೆ ಕಳುಹಿಸಿದ್ದೆ. ದುರಾದೃಷ್ಟವಶಾತ್‍ ಪ್ರಕಟವಾಗಲಿಲ್ಲ. ಘಟನೆ ಓದುವಾಗ ದುಃಖ್ಖ ಉಮ್ಮಳಿಸುತ್ತದೆ.

    ReplyDelete
  2. ತುಂಬಾ ಧನ್ಯವಾದಗಳು ಸರ್......

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...