Tuesday, July 12, 2011

ಸರದಾರ್ ಅಂಕಲ್

ಸರದಾರ್ ಅಂಕಲ್ ರವರ ಮನೆ ನಮ್ಮ ಬಿಲ್ಡಿಂಗಿನ ಬದಿಯಲ್ಲಿತ್ತು, ಅವರ ಮನೆ ಹಾಗು ನಮ್ಮ ಬಿಲ್ಡಿಂಗ್ ಒಟ್ಟು ಒಟ್ಟು ಸೇರಿ ಸೇರಿ ಇತ್ತು, ಅವರು ಹಾಗು ಅವರ ಕುಟುಂಬಸ್ತಿಯರು ನಮ್ಮ ಬಿಲ್ಡಿಂಗಿನ ನೆಲ ಅಂತಸ್ತಲ್ಲಿದ್ದ ಕಾಮಾನ್ ಬಾತ್ ರೂಮ್ / ಟೊಯಿಲ್ಟ್ ಉಪಯೋಗಿಸುತ್ತಿದ್ದರು.

ಸರದಾರ್ ಅಂಕಲ್ ೫೦+ ವರುಷ ಹರೆಯದ ಗಟ್ಟಿ ಮುಟ್ಟದ ಹಾಗು ತುಂಬಾ ಶಾರ್ಟ್ ಟೆಂಪೆರ್(ಕೋಪಿಷ್ಠ... ) ಮನುಷ್ಯ, ಕೋಪ ಅವರ ಮೂಗಿನಲ್ಲಿ ೨೪ ಗಂಟೆ ಇರುತಿತ್ತು, ಅವರ ಕೋಪದ ಸ್ವಭಾವದಿಂದಾಗಿ ನಮ್ಮ ಬಿಲ್ಡಿಂಗಿನವರು ಅವರತ್ತಿರ ಮಾತಾಡಲಿಕ್ಕೆ ಸಹ ಹೆದರುತ್ತಿದ್ದರು, ಸರದಾರ್ ಅಂಕಲ್ ಹಾಗು ನಮ್ಮ ಬಿಲ್ಡಿಂಗ್ ನಲ್ಲಿರುವ ಜನರ ಮದ್ಯೆ ಯಾವಾಗಲು ನೀರಿಗಾಗಿ ಹಾಗು ಬಾತ್ ರೂಮ್ / ಟೊಯಿಲ್ಟ್ ಗಾಗಿ ಜಗಳ ಆಗುತ್ತಿತ್ತು. 

ಆ ದಿನಗಳಲ್ಲಿ ನಮ್ಮ ಬಿಲ್ಡಿಂಗ್ ನಲ್ಲಿ ನೀರಿನ ತುಂಬಾ ಕೊರತೆ ಇತ್ತು, ಮುನಿಸಿಪಾಲಿಟಿಯವರು ನೀರು ತುಂಬಾ ಕಡಿಮೆ ಬಿಡುತ್ತಿದ್ದರು, ಆ ನೀರು ಒಂದನೇ, ಎರಡನೆ ಹಾಗು ಮೂರನೇ ಮಹಡಿಯವರಿಗೆ ಬರುತ್ತಿರಲಿಲ್ಲ,  ನೀರು ಖಾಲಿ ನೆಲ ಅಂತಸ್ತಿನ ಬಾತ್ ರೂಮಲ್ಲಿ ಬರುತ್ತಿತ್ತು, ಒಂದನೇ, ಎರಡನೆ ಹಾಗು ಮೂರನೇ ಮಹಡಿಯವರು ತನ್ನ ತನ್ನ ಬಕೆಟ್  ಇಡಿದು ಕೆಳಗೆ ಗ್ರೌಂಡ್ ಫ್ಲೂರಿನ ಬಾತ್ ರೂಮ್ ಗೆ ನೀರಿಗಾಗಿ ಬರುತ್ತಿದ್ದರು, ಇಲ್ಲಿ ಸಮಸ್ಯೆ ಏನೆಂದರೆ ಆ ದಿನದಲ್ಲಿ ನೀರು ರಾತ್ರಿಗೆ ಎಂಟು ಗಂಟೆ ಯಿಂದ ಹತ್ತು ಗಂಟೆಯವರಗೆ ಬರುತ್ತಿತ್ತು, ಆದರೆ ಸರದಾರ್ ಅಂಕಲ್ ಎಂಟು ಮುಕ್ಕಾಲು ತನಕ ಯಾರನ್ನು ಬಾತ್ ರೂಮಿ ನ ಒಳಗೆ ಬರಲು ಬಿಡುತ್ತಿರಲಿಲ್ಲ, ಸರದಾರ್ ಅಂಕಲ್ ನವರು ತನ್ನ ಮೆಚ್ಚಿನ ಸೋಪ್ "ಲೈಫ್ ಬೌಯ್ "ನಿಂದ ಸ್ನಾನ ಮಾಡಿ, ತನ್ನ ಬಟ್ಟೆ ತೊಳೆದು ಹಾಗು ತನ್ನ ಮನೆಗೆ ಪೈಪಿಂದ ನೀರು ತುಂಬಿಸಿದ ನಂತರವೇ ಬೇರೆಯವರಿಗೆ ನೀರಿನ ಗತಿ, ಇದರಿಂದ ಒಂದನೇ , ಎರಡನೆ ಹಾಗು ಮೂರನೇ ಮಹಡಿಯವರಿಗೆ ತುಂಬಾ ಕಷ್ಟ ವಾಗುತ್ತಿತ್ತು, ಸರದಾರ್ ಅಂಕಲ್ ಯಾರನ್ನೂ ಅವರು ಬಾತ್ ರೂಮಿ ನಲ್ಲಿದ್ದಾಗ ಒಳಗೆ ಬಿಡುತ್ತಿರಲಿಲ್ಲ, ಇದರಿಂದ ದಿನಾಲೂ ಏನಾದರೂ ಜಗಳ ಆಗುತ್ತಿತ್ತು.

ಬಿಲ್ಡಿಂಗಿನ ಮಕ್ಕಳು ಸರದಾರ್ ಅಂಕಲ್ ಹತ್ತಿರ ಹೋಗಲು ಹೆದರುತ್ತಿದ್ದರು, ಆದರೆ ಸರದಾರ್ ಅಂಕಲಿಗೆ ನಾನಂದರೆ ತುಂಬಾ ಇಷ್ಟ, ನಾನು ಯಾವಾಗಲು ಅವರಲ್ಲಿ ಹೋದರೆ ಅವರು ಪ್ರೀತಿಯಿಂದ ನನಗೆ ಏನಾದರೂ ತಿನ್ನಲಿಕ್ಕೆ ಕೊಟ್ಟು ಮುದ್ದಿಸುತ್ತಿದ್ದರು, ಇದರಿಂದ ನಮ್ಮ ಬಿಲ್ಡಿಂಗಿನಲ್ಲಿರುವವರಿಗೆ ಆಶ್ಚರ್ಯ ವಾಗುತ್ತಿತ್ತು, ನಾವು ಮೂರನೇ ಮಹಡಿಯಲ್ಲಿ ಇರುತ್ತಿದ್ದೆವು , ನನ್ನ ಅಮ್ಮ ನನ್ನನ್ನು ಬಕೆಟ್  ಕೊಟ್ಟು ನೀರಿಗಾಗಿ ಕಳಿಸುತ್ತಿದ್ದರು,  ಯಾಕೆಂದರೆ ಸರದಾರ್ ಅಂಕಲ್ ನನ್ನನ್ನು ಮಾತ್ರ ಬಾತ್ ರೂಮಿನ ಒಳಗೆ ಬರಲು ಬಿಡುತ್ತಿದ್ದರು. ನಾನು ಯಾವಾಗಲು ಬಕೆಟ್ ತೆಗೊಂಡು ನೀರಿಗಾಗಿ ಹೋದರೆ, ಸರದಾರ್ ಅಂಕಲ್ ನನ್ನನ್ನು ದುರುಗುಟ್ಟಿ ನೋಡಿ ಕೇಳುತ್ತಿದ್ದರು "ತು ಕ್ಯೂ ಆಯಾ ಹೈ ಯಹಾ" ( ನೀನು ಯಾಕೆ ಬಂದೆ ಇಲ್ಲಿ), ನಾನು ಮೆಲ್ಲನೆ ಹೇಳುತ್ತಿದ್ದೆ  " ಅಂಕಲ್ , ಘರ್ ಮೇ ಪಾನಿ ನಹಿ ಹೈ" (ಅಂಕಲ್, ಮನೆಯಲ್ಲಿ ನೀರು ಇಲ್ಲ), ಇದಕ್ಕೆ ಅವರು ಜೋರಿನಿಂದ ಬೈಯ್ಯುತ್ತಿದ್ದರು "ತೋ ಆ ನಾ ಅಂಧರ್ ಬಹಾರ್ ಸೆ ಪಾನಿ ಬರೆಗ ಬೇವಕೂಫ್" (ಹಾಗಾದರೆ ಒಳಗೆ ಬಾ ಅಲ್ಲ , ಹೊರಗಿನಿಂದ ನೀರು ತುಂಬಿಸು ತ್ತಿಯ, ಮೂರ್ಖ), ನಾನು ನನ್ನ ಬಕೆಟ್  ಇಡಿದು ಒಳಗೆ ಓಡುತ್ತಿದ್ದೆ.

ಬಿಲ್ಡಿಂಗಿನ ಎಲ್ಲ ಜನರು ಇದರಿಂದ ಆಶ್ಚರ್ಯದಲ್ಲಿದ್ದರು,  ನನಗೆ ನೆನಪಿದೆ ನಾವು ಕಾಂಪೌಂಡಲ್ಲಿ ಕ್ರಿಕೆಟ್ ಆಡುವಾಗ ನಮ್ಮ ಬಾಲ್ ಸರದಾರ್ ಅಂಕಲಿನ ಕಾಂಪೌಂಡಿಗೆ ಹೋಗುತ್ತಿತ್ತು, ಅವರು ಬೊಬ್ಬೆ ಹಾಕುತ್ತಿದ್ದರು "ಬಾಗೋ ಸಾಲೋ ...ಕಾಮ್ ದಂದ ನಹಿ ಹೈ, ಭಾಗೋ ಯಹಾ ಸೆ "(ಓಡಿ ಇಲ್ಲಿಂದ ...ಕಾರ್ಯ ಕೆಲಸ ಏನಿಲ್ಲ ...ಓಡಿ ಇಲ್ಲಿಂದ ), ಆಗ ನನ್ನ ಮಿತ್ರರು ನನಗೆ ಬಾಲ್ ತರಲಿಕ್ಕೆ ಕಳಿಸುತಿದ್ದರು, ನಾನು ಮೊದಲು ನಿರಕಾರಿಸಿದರು ಅವರ ಒತ್ತಾಯಕ್ಕೆ ಬಾಲ್ ತರಲು ಸರದಾರ್ ಅಂಕಲ್ ಹತ್ತಿರ ಹೋಗುತ್ತಿದ್ದೆ,  ನಾನು ಮೆಲ್ಲನೆ ಸರದಾರ್ ಅಂಕಲಿಗೆ ಕೇಳುತ್ತಿದ್ದೆ "ಅಂಕಲ್ ಸಾರೀ ಆಪ್ಕೆ ಪಾಸ್ ಬಾಲ್ ಆ ಗಯಾ , ನೆಕ್ಷ್ತ ಟೈಮ್ ನಹಿ ಆಯೇಗಾ " (ಅಂಕಲ್ ಸಾರೀ ನಿಮ್ಮಲ್ಲಿ  ಬಾಲ್ ಬಂದಿದೆ, ನೆಕ್ಷ್ತ ಟೈಮ್ ಬರುದಿಲ್ಲ ), ಅವರು ಕೋಪದಿಂದ ನನ್ನನ್ನು ನೋಡಿ  ನನ್ನಲ್ಲಿ ಬಾಲ್ ಬಿಸಾಡುತ್ತಿದ್ದರು ,  ಈ ಪ್ರಸಂಗ ಬಹುತೇಕ ಪ್ರತಿ ದಿನ ನಡೆಯುತ್ತಿತ್ತು. 

ನನ್ನನ್ನು ನೋಡಿ ಸರದಾರ್ ಅಂಕಲ್'ನವರ ಹೃದಯ ಹೇಗೆ ಕರಗುತ್ತಿತ್ತೋ ನನಗೂ  ಅರ್ಥವಾಗುತ್ತಿರಲಿಲ್ಲ,  ಸರದಾರ್ ಅಂಕಲ್'ನವರ ಪರಿವಾರ ಅಂದರೆ ಅವರ ಮಗ ಕುಲದೀಪ್ ಮತ್ತೆ ಕುಲದೀಪನ ಹೆಂಡತಿ ಅಷ್ಟೇ, ಕುಲದೀಪ್ ಯಾವಾಗಲು ತಂದೆಯ ಎದುರಲ್ಲಿ ಬೆಪ್ಪು ಕಟ್ಟುತಿದ್ದ, ತುಂಬಾ ಹೆದರುತ್ತಿದ್ದ, ಕುಲದೀಪ್ ನ ಹೆಂಡತಿಯು ಅವರಿಗೆ ತುಂಬಾ ಹೆದರುತ್ತಿದ್ದಳು.

ದಿನ ಉರುಳಿದಂತೆ...... ಒಂದು ದಿನ ನನ್ನ ತಂದೆಯವರು ಹೋಟೆಲಿನಿಂದ ಬೇಗ ಮನೆಗೆ ಬಂದರು, ನನ್ನ ಅಮ್ಮ ಆಶ್ಚರ್ಯದಿಂದ " ಇನಿ ಧಾನಿ ಬೇಗ"? (ಇವತ್ತೇನು ಬೇಗ?), ತಂದೆಯವರು ಸ್ವಲ್ಪ ಹೊತ್ತು ಮೌನ ಇದ್ದು ನಂತರ ಹೇಳಿದ್ದರು "ನಮ್ಮ ಸರದಾರ್ ತೀರ್ ಪೋಯೇ" (ನಮ್ಮ ಸರದಾರ್ ಇನ್ನು ಇಲ್ಲ ), ನನ್ನ ಅಮ್ಮ ಆಶ್ಚರ್ಯದಿಂದ ಬೊಬ್ಬೆ ಹಾಕಿದರು "ಅಯ್ಯೋ ದೇವರೇ" ಮತ್ತೆ ನನ್ನ ಕಡೆ ನೋಡಿದರು, ನನ್ನ ಚಿಕ್ಕ ವಯಸ್ಸು ಅವರ ಮಾತನ್ನು ಅರ್ಥ ಮಾಡಿಕೊಳ್ಳಲಾಗದೆ ನಾನು ಅಮ್ಮನನ್ನು ಕೇಳಿದೆ " ಯಿನ ಅಂಡ್ ಅಮ್ಮ"? (ಏನಾಯಿತು ಅಮ್ಮ?), ಅಮ್ಮ ಮೆಲ್ಲನೆ "ನಿನ್ನ ಸರದಾರ್ ಅಂಕಲ್ ನನ ಇಜ್ಜೆರ್, ಆರ್ ತೀರ್ ಪೋಯೆರ್ " (ನಿನ್ನ ಸರದಾರ್ ಅಂಕಲ್ ಇನ್ನು ಇಲ್ಲ, ಅವರು ತೀರಿ ಹೋದರು). ನಾನು ನಿಂತಲ್ಲಿಯೇ ಕಲ್ಲಾದೆ, ನನ್ನ ಕಣ್ಣಿನಿಂದ ಅಶ್ರು ಧಾರೆ ಸುರಿಯಲಾರಂಭಿಸಿತು ಹಾಗು ನಾನು ಜೋರಿನಿಂದ ಅಳಲು ಶುರು ಮಾಡಿದೆ.

ಹೇಗೆ ಮರೆಯಲಿ ಆ ಸರದಾರ್ ಅಂಕಲ್'ರನ್ನು, ಅವರು ತನ್ನ ಸ್ವಭಾವ ಮೀರಿ ನನ್ನ ಮೇಲೆ ಪ್ರೀತಿಯ ಮಳೆ ಸುರಿಸುತ್ತಿದ್ದರು, ಸರದಾರ್ ಅಂಕಲ್ ನಿಮ್ಮನ್ನು ಮರೆಯಲು ಸಾದ್ಯವಿಲ್ಲ.

by ಹರೀಶ್ ಶೆಟ್ಟಿ, ಶಿರ್ವ 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...