Thursday, 14 July, 2011

ದಡಂ......

ಹುಡುಕಿದೆ ನಾನು
ಅಲ್ಲಿ ಇಲ್ಲಿ ಆತಂಕದ ನಡುವಿನಲ್ಲಿ
ತುಂಬಾ ಹುಡುಕಿದೆ
ಕೆಲಸ ಮುಗಿಯುತ್ತಲೇ
ಬೇಗನೆ ಮನೆಗೆ ಸೇರುವೆನೆಂದು
ಬಸ್ಸನ್ನು ಕಾಯುತ ಅವನು
ಫೋನ್ ಮಾಡಿ ಹೇಳಿದ ನನಗೆ
"ಹಲೋ ೧೦ ನಿಮಿಷದಲ್ಲಿ ಬರುತ್ತೇನೆಂದು"
ಎಲ್ಲಿದ್ದಾನೆ ಅವನು
ಎಲ್ಲಿ ಅವನನ್ನು ಹುಡುಕಲಿ
ಹೇಗೆ ಅವನನ್ನು ಹುಡುಕಲಿ
ಎಲ್ಲಿಯೂ ಕೇಳಿದರು
ಎಲ್ಲರ ಮುಖದಲ್ಲಿ ಪ್ರಶ್ನೆಗಳೇ
ಎಲ್ಲರ ಮುಖದಲ್ಲಿ ಆತಂಕ
ಕಂಡೆ ನಾ ನನ್ನಂತವರನ್ನು
ಅವರೂ ಹುಡುಕುತ್ತಿದರು
ಅಲ್ಲಿ ಇಲ್ಲಿ ಎಲ್ಲಿ ನೋಡಿದರು
ರಕ್ತವೇ ರಕ್ತ
ಆತಂಕವೆ ಆತಂಕ
ಕೊನೆಗೆ ಸಿಕ್ಕಿದ ಅವನು
ಆದರೆ ಮುಗಿದಿತ್ತು ಅವನ ಕಥೆ
ಹೊಟ್ಟೆ ಪಾಡಿಗಾಗಿ
ಹಣ ಗಳಿಸಲು ಹೋದವನು
ಹೆಣವಾಗಿ ಮನೆಗೆ ಸೇರಿದ
ನನ್ನ ಹುಡುಕಾಟ ಮುಗಿದಿತ್ತು
by ಹರೀಶ್ ಶೆಟ್ಟಿ ,ಶಿರ್ವ

No comments:

Post a Comment